ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಸುದ್ದಿ - ಸಮುಚ್ಛಯ
Share
ಯಕ್ಷಪುತ್ಥಳಿ ಮನೆಯಲ್ಲಿ ಫ್ರಾನ್ಸ್‌ನ ವಿದ್ಯಾರ್ಥಿಗಳು

ಲೇಖಕರು :
ಸತೀಶ್ ನಾಯಕ್ , ಪಕಳಕು೦ಜ
ಸೋಮವಾರ, ಸೆಪ್ಟೆ೦ಬರ್ 23 , 2013
ಸೆಪ್ಟೆ೦ಬರ್ 23 , 2013

ಯಕ್ಷಪುತ್ಥಳಿ ಮನೆಯಲ್ಲಿ ಫ್ರಾನ್ಸ್‌ನ ವಿದ್ಯಾರ್ಥಿಗಳು

ಮಂಗಳೂರು : ನಿರ್ಮಾಣ ಹಂತದಲ್ಲಿರುವ ಯಕ್ಷ ಪುತ್ಥಳಿ ಬೊಂಬೆ ಮನೆಗೆ ಫ್ರಾನ್ಸ್‌ನ ವಿದ್ಯಾರ್ಥಿಗಳು ಭೇಟಿ ನೀಡಿ ಯಕ್ಷ ಬೊಂಬೆಗಳನ್ನು ವೀಕ್ಷಿಸಿ 'ಇದು ಎಂಥ ಲೋಕವಯ್ಯ...' ಎಂದು ಬಣ್ಣಿಸಿದರು.

ಭಾರತೀಯ ದಿರಸು, ರಂಗಕಲೆಗಳ ವೇಷ ಭೂಷಣಗಳ ಬಗ್ಗೆ ಅಧ್ಯಯನ ನಡೆಸಲು ಫ್ರಾನ್ಸ್‌ನ ಲಿಯೋನ್‌ನ ವಿದ್ಯಾರ್ಥಿಗಳಾದ ಸಿಂಡಿಲೊಂಬಾರ್ಡಿ ಮತ್ತು ನೊಬಿರೋನ್‌ ಕಾರೋಲ್‌ ಕಾಸರಗೋಡಿನ ಚಂದ್ರಗಿರಿ ತೀರದ ಪಿಲಿಕುಂಜೆಯ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಬೊಂಬೆಯಾಟ ಸಂಘದ ನಿರ್ಮಾಣ ಹಂತದಲ್ಲಿರುವ ಯಕ್ಷ ಪುತ್ಥಳಿ ಬೊಂಬೆ ಮನೆಯನ್ನು ಸಂದರ್ಶಿಸಿ ಯಕ್ಷಗಾನ ಬೊಂಬೆಗಳ ಬೆಡಗಿಗೆ ಬೆರಗಾದರು.

ನಿರ್ಮಾಣ ಹಂತದಲ್ಲಿರುವ ಯಕ್ಷ ಪುತ್ಥಳಿ ಬೊಂಬೆ ಮನೆಗೆ ಫ್ರಾನ್ಸ್‌ನ ವಿದ್ಯಾರ್ಥಿಗಳು ಭೇಟಿ ನೀಡಿದರು.
ಈ ವಿದ್ಯಾರ್ಥಿಗಳು ಬೊಂಬೆಗಳ ಮಾಹಿತಿ, ಕುಣಿಸುವ ರೀತಿಯನ್ನು ಬೊಂಬೆ ಮನೆಯ ನಿರ್ದೇಶಕ ರಮೇಶ್‌ ಕೆ.ವಿ. ಅವರಿಂದ ತಿಳಿದುಕೊಂಡರು. ನಿರ್ಜೀವ ಮರದ ಕೊರಡುಗಳಲ್ಲಿ ಜೀವ-ಭಾವ ತುಂಬುವ ಬೊಂಬೆಗಳ ನಿರ್ಮಾಣದ ಕುರಿತು ವಿವರಿಸಿದರು. ಪಾತ್ರಗಳಿಗೆ ತಕ್ಕಂತೆ ಬೊಂಬೆಗಳಿಗೆ ತೊಡಿಸುವ ಆಭರಣಗಳನ್ನು ಕಲಾತ್ಮಕವಾಗಿ ಕುಸುರಿ ಕೆಲಸ ಮಾಡಿ ಸಿದ್ಧಪಡಿಸುವುದನ್ನು ವಿದ್ಯಾರ್ಥಿಗಳು ವೀಕ್ಷಿಸಿದರು. ಬೊಂಬೆಗಳ ಮುಖಭಾವಕ್ಕೆ ತಕ್ಕಂತೆ ಬಣ್ಣಗಳನ್ನು ಹಚ್ಚುವ ರೀತಿ, ಕೈಕಾಲು, ರುಂಡಗಳಿಗೆ ಕೀಲುಗಳನ್ನು ಜೋಡಿಸಿ ಕೈಗಳು, ಕಾಲುಗಳು ಮತ್ತು ಶಿರೋಭಾಗಕ್ಕೆ ತಪ್ಪು ದಾರಗಳನ್ನು ಅಳವಡಿಸುವುದನ್ನು ವೀಕ್ಷಿಸಿದರು. ರಮೇಶ್‌ ಅವರು ದಾರಗಳನ್ನು ಹಿಡಿದು ಬೆರಳುಗಳಿಂದ ಬೊಂಬೆಗಳನ್ನು ಕುಣಿಸುವ ಅಪೂರ್ವ ಕಲೆ ವಿದ್ಯಾರ್ಥಿಗಳನ್ನು ಆಶ್ಚರ್ಯಚಕಿತರನ್ನಾಗಿಸಿತು.

ಸಿಂಡಿ ಲೊಂಬಾರ್ಡಿ ಮತ್ತು ನೊಬಿಲೋನ್‌ ಕಾರೋಲ್‌ ಅವರು ಲಿಯೋನ್‌ನ ಸ್ಕೂಲ್‌ ಆಫ್‌ ಆರ್ಟ್ಸ್ ಆ್ಯಂಡ್‌ ಕ್ರಾಫ್ಟ್ನ ವಿದ್ಯಾರ್ಥಿಗಳು. ಸ್ಥಳದಲ್ಲೇ ಚಿತ್ರ ಬಿಡಿಸುವುದರಲ್ಲಿ ನಿಸ್ಸೀಮರು. ಯಕ್ಷಗಾನ ಬೊಂಬೆಗಳ ಚಿತ್ರಗಳನ್ನು ಅವರಿಬ್ಬರು ಕ್ಷಣಮಾತ್ರದಲ್ಲಿ ಬಿಡಿಸಿದರು.

ಕೃಪೆ : ಉದಯವಾಣಿ

Share





ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ




ಪೂರಕ ಲೇಖನಗಳು
 



ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ